ಜಸ್ಟ್ ಆಕಸ್ಮಿಕ ದ್ವಿತೀಯ ಹಂತ
Posted date: 02 Tue, Jun 2015 – 08:38:08 AM

ಐಸ್‌ಸ್ಪೈಸ್ ಪ್ರೊಡಕ್ಷನ್ಸ್ (ಪ್ರೈ.) ಲಿ. ಲಾಂಛನದಡಿಯಲ್ಲಿ ಹಿಮಾಯತ್ ಖಾನ್ ನಿರ್ಮಿಸುತ್ತಿರುವ ಜಸ್ಟ್ ಆಕಸ್ಮಿಕ ಚಿತ್ರದ ದ್ವಿತೀಯ ಹಂತದ ಚಿತ್ರೀಕರಣವು ಇದೇ ೨೮ ರಿಂದ ನಗರದಲ್ಲಿ ಆರಂಭವಾಯಿತು.
ಚಿತ್ರಕ್ಕಾಗಿ ತಿಲಕ್, ಸಂಜನಾ, ರಮೇಶ್ ಭಟ್, ಸುಧಾ ಬೆಳವಾಡಿ ಮತ್ತಿತರರು ಭಾಗವಹಿಸಿದ ಹಲವಾರು ಸನ್ನಿವೇಶಗಳನ್ನು ನಗರದ ಸುತ್ತಮುತ್ತ  ಮಹಮ್ಮದ್ ಹಸೀಬ್ ಛಾಯಾಗ್ರಹಣದಲ್ಲಿ ನಿರ್ದೇಶಕ ಹಿಮಾಯತ್ ಖಾನ್ ಚಿತ್ರಿಸಿಕೊಂಡರು.
ದ್ವಿತೀಯ ಹಂತದ ಚಿತ್ರೀಕರಣವು ಜೂನ್ ೯ ರವರೆವಿಗೂ ನಡೆಯಲಿದೆ. ಎಂದು ನಿರ್ಮಾಪಕರು ತಿಳಿಸಿದ್ದಾರೆ.  
ಚಿತ್ರಕ್ಕೆ ಶಿವಾನಂದ್ ಮಠಪತಿ ಸಂಭಾಷಣೆ, ಸಾಹಿತ್ಯ ಮಹಮ್ಮದ್ ಹಸೀಬ್ ಛಾಯಾಗ್ರಹಣ, ಶಿವು ಜಮಖಂಡಿ ಸಂಗೀತ, ಧನಂಜಯ್ ನೃತ್ಯ ಹಾಗೂ ಚಂದ್ರಪ್ಪ ನಿರ್ಮಾಣ ನಿರ್ವಹಣೆ ತಮ್ಮ ಲಕ್ಷ್ಮಣ್ ಕಲೆ ನಿರ್ದೇಶನವಿದೆ.
ತಾರಾಗಣದಲ್ಲಿ ವಿನೋದ್‌ಪಾಟೀಲ್, ತಿಲಕ್, ಸಂಜನಾ, ಸಚಿನ್ ಸುವರ್ಣ ರಮೇಶ್ ಭಟ್, ಮುಖ್ಯಮಂತ್ರಿ ಚಂದ್ರು, ಸುಧಾ ಬೆಳವಾಡಿ, ಮೋಹನ್ ಜುನೇಜಾ, ಪ್ರೇಮ್‌ಶಾಂತ್, ಶೀಲಾ ಹಾಸನ್ ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed